Thursday, November 11, 2010

A Poem for me...


THIS IS FOR U
ನೆನಪಿನ ಬುತ್ತಿಯಲ್ಲೊಂದು ಸಿಹಿಯಾದ ತುತ್ತು
ಗೆಳತಿ ನಿನ್ನೊಡನೆ ಕಳೆದ ಸವಿಯಾದ ಹೊತ್ತು.
ಕೈಯ ಹಿಡಿದು ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಆಡಿ ನಲಿದಾಡಿಗಳಿಸಿದ ಮುತ್ತಿನಂಥ ಸಂಪತ್ತು.
ಮುಂಜಾವಿನ ಇಬ್ಬನಿಯಂತೆ ಶುದ್ಧ
ಮುಸ್ಸಂಜೆಯ ರವಿಯಂತೆ ಸುಮಧುರ.
ಗೆಳತನಕೊಂದು ನವಿಲುಗರಿಯಂತೆ
ಗೆಳತಿ ನಿನ್ನ ಗೆಳೆತನ.

- Dhinakar Subramanya :D

Wednesday, November 10, 2010

Dhinkar's poem - http://mugilamane.wordpress.com

ನಿಶಬ್ದದದಾಚೆಗಿನ ಶಬ್ದವೋ |
ಸ್ತಬ್ಧತೆಯಾಚೆಗಿನ ಚಲನವೋ |
ವಿಸ್ತಾರದಾಚೆಗಿನ ಚುಕ್ಕಿಯೋ |
ಸೌಮ್ಯತೆಯಾಚೆಗಿನ ರೌದ್ರವೋ |
ಪ್ರೀತಿಯಾಚೆಗಿನ ಕೊನೆಯ ಉಸಿರೋ |
ಏನು ಇಡಲೀ ನಿನ್ನ ಹೆಸರ ||