Tuesday, April 12, 2011

ಖುಷಿ......


ಖುಷಿ......

ಖುಷಿ ಕೊಡುತ್ತೆ;
ಮುತ್ತುಗಳು  ಉದುರುವಂತೆ ನೀ ನಕ್ಕಾಗ ಖುಷಿ ಕೊಡುತ್ತೆ;
ಮೈಸೂರು ಮಲ್ಲಿಗೆಯಂತೆ ಸುವಾಸನೆ ಇರುತ್ತೆ ನೀ ಮಾತಾಡಿದಾಗ;
ಹುಣ್ಣಿಮೆ ಚಂದ್ರನಂತೆ ಹೊಳೆಯುವ ಆ ನಿನ್ನ ಕಣ್ಣು ಕಂಡಾಗ ಖುಷಿ ಕೊಡುತ್ತೆ; 
ಪುಟ್ಟ ಪುಟ್ಟ ಹೆಜ್ಜೆ ಇಟ್ಟು, ಬಣ್ಣದಂತ ಬಟ್ಟೆ ತೊಟ್ಟು ನಿನ್ನ ಕಂಡಾಗ ಖುಷಿ ಕೊಡುತ್ತೆ;
ಕಳ್ಳ ಕಪಟವಿಲ್ಲದ ಮುದ್ದಿನ ಗಿಣಿಯೆ ನೀ ನನ್ನ ಅಮ್ಮಮ್ಮ ಅಂದಾಗ ಖುಷಿ ಕೊಡುತ್ತೆ;
ಮಧು ಆರೋಗ್ಯವನ್ನು ಕೊಟ್ಟಂತೆ, ನೀ ಆನಂದವನ್ನು ಕೊಡುತ್ತೀಯ ಎಂದು ನೆನೆದಾಗ;
ಬಲು ಖುಷಿ ಕೊಡುತ್ತೆ;


- ಇಂತಿ ನಿನ್ನ ಅಮ್ಮಮ್ಮ